ಮಂಜೇಶ್ವರ:- ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆ ಹಾಗೂ ಕುಟುಂಬಶ್ರೀ ಮಿಂಜದ ಸಂಯೋಗದಲ್ಲಿ ಎಸ್.ಎಸ್.ಕೆ ಕಾಸರಗೋಡಿನ ವತಿಯಿಂದ ಎಸ್.ಟಿ ಕೊಲೊನಿ ಅಡ್ಕತಗುರಿ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಗೆ ಒನ್ಲೈನ್ ತರಗತಿ ವೀಕ್ಷಿಸಲು ಉಚಿತ ಸ್ಮಾರ್ಟ್ ಟಿವಿ ವಿತರಣೆ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ದಿನೇಶ್.ವಿ ನೆರವೇರಿಸಿದರು.ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್. ರಾವ್ .ಆರ್.ಎಂ,ಮಿಂಜಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೊಹಿದಿನ್ ಕುಂಞಃ ,ಮಂಜೇಶ್ವರ ಬಿ.ಪಿ.ಓ ಆದರ್ಶ್ ,ಕುಟುಂಬಶ್ರೀ ಮಿಂಜಾ ಘಟಕದ ಅಧ್ಯಕ್ಷೆ ಲತಾದೇವಿ,ಬಿ.ಆರ್.ಸಿ ಯ ಸಂಪನ್ಮೂಲ ವ್ಯಕ್ತಿ ಮೋಹಿನಿ ಟೀಚರ್ ಹಾಗೂ ವಿದ್ಯಾವರ್ಧಕ ಎ.ಯು.ಪಿ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ.ವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ರಾಮಚಂದ್ರ.ಕೆ.ಎಂ,ಲಕ್ಷ್ಮೀಶ.ಬಿ, ಕುಟುಂಬಶ್ರೀ ಸದಸ್ಯರು,ವಿದ್ಯಾರ್ಥಿಗಳು ಹಾಗೂ ಹೆತ್ತವರು ಭಾಗವಹಿಸಿದರು.ಕಾರ್ಯಕ್ರಮವನ್ನು ಮಿಂಜಾ ಎಸ್.ಟಿ.ಪ್ರೋಮೋಟರ್ ಜಯಮಾಲ ಸ್ವಾಗತಿಸಿ ಅಧ್ಯಾಪಕರಾದ ರಘುವೀರ್ ರಾವ್ ವಂದಿಸಿದರು.ಕಾರ್ಯಕ್ರಮವನ್ನು ಅಧ್ಯಾಪಕರಾದ ಅರವಿಂದಾಕ್ಷ ಭಂಡಾರಿ ನಿರೂಪಿಸಿದರು.
 |
Add caption
|
Comments
Post a Comment