ಕನ್ನಡ ಮಾಧ್ಯಮ ಸರ್ವ ಶ್ರೇಷ್ಠ.ನಾವು ನಮ್ಮ ಹಿರಿಯರೆಲ್ಲರೂ ಕನ್ನಡ ಮಾಧ್ಯಮದಿಂದಲೇ ಉನ್ನತ ಸಾಧನೆಯನ್ನು ಸಾಧಿಸಿದವರು. ನಾಗರಾಜ ರಾವ್ ಜನರಲ್ ಮೆನೇಜರ್ ಕರ್ನಾಟಕ ಬ್ಯಾಂಕ್ ....................................
ವಿದ್ಯಾವರ್ಧಕ ಎ.ಯು.ಪಿಶಾಲೆ ಮೀಯಪದವು
ಕರ್ನಾಟಕ ಬ್ಯಾಂಕಿನ ಸಹಯೋಗದಿಂದ ನವೀಕರಿಸಲ್ಪಟ್ಟ ಭೋಜನ ಶಾಲೆಯ ಉದ್ಘಾಟನೆ
.....................................
ಕನ್ನಡ ಮಾಧ್ಯಮ ಸರ್ವ ಶ್ರೇಷ್ಠ.ನಾವು ನಮ್ಮ ಹಿರಿಯರೆಲ್ಲರೂ ಕನ್ನಡ ಮಾಧ್ಯಮದಿಂದಲೇ ಉನ್ನತ ಸಾಧನೆಯನ್ನು ಸಾಧಿಸಿದವರು.
ನಾಗರಾಜ ರಾವ್ ಜನರಲ್ ಮೆನೇಜರ್ ಕರ್ನಾಟಕ ಬ್ಯಾಂಕ್
....................................
ವಿದ್ಯಾವರ್ಧಕ.ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಕರ್ನಾಟಕ ಬ್ಯಾಂಕ್ ನ ಸಿ.ಎಸ್.ಆರ್ ಸ್ಕೀಮ್ ನ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನ ಭೋಜನಶಾಲೆಯ ಹಾಲ್ ನ್ನು ಟೈಲ್ಸ್ ಹಾಕಿ ನವೀಕರಿಸಲಾಯಿತು.ನೂತನ ಹಾಲನ್ನು ಕರ್ನಾಟಕ ಬ್ಯಾಂಕ್ ಜನೆರಲ್ ಮೆನೇಜರ್ ನಾಗರಾಜ ರಾವ್ ಅವರು ಶಿಲಾಫಲಕವನ್ನು ಅನಾವರಣಗೊಳಿಸುವ ಮೂಲಕ ನೂತನ ಹಾಲನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಮರ್ಪಿಸಿದರು. ಮಿಂಜಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ದಿನೇಶ್ ವಿ,ಉಪಜಿಲ್ಲಾ ಎನ್.ಎಂ.ಪಿ ಆಫೀಸರ್ ಜಿತೇಂದ್ರ, ಕೃಷಿಕರಾದ ಸೂರ್ಯನಾರಾಯಣ ಮಯ್ಯ,ಮಿಂಜಾ ವಾರ್ಡ್ ಸದಸ್ಯೆ ರುಕ್ಯ ಸಿದ್ದಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ,ಶುಭಾಶಂಸನೆ ಗೈದರು.ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ರಾಜೇಶ್ವರಿ ಎಸ್.ರಾವ್,ಪಿಟಿಎ ಅಧ್ಯಕ್ಷರಾದ ಕೃಷ್ಣಪ್ರಸಾದ್,ಎಂಪಿಟಿಎ ಕೈರುನ್ನಿಸ ಉಪಸ್ಥಿತರಿದ್ದರು.ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್.ಎಂ ಸ್ವಾಗತಿಸಿದ ಸಭೆಯಲ್ಲಿ ಶ್ರೀ ಅರವಿಂದಾಕ್ಷ ಭಂಡಾರಿ ಪ್ರಾಸ್ತಾವಿಕ ಭಾಷಣಗೈದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುಧಾಕರ ವಿ ಅವರ ಧನ್ಯ ವಾದದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಬಾಲಕೃಷ್ಣ.ಎಂ ನಿರೂಪಿಸಿದರು.
Comments
Post a Comment