ವಿದ್ಯಾವರ್ಧಕ ಶಾಲಾ ಪ್ರವೇಶೋತ್ಸವ 2023-24

 

ವಿದ್ಯಾವರ್ಧಕ ಶಾಲೆ ಮೀಯಪದವು ಇಲ್ಲಿನ 2023 - 24ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವು ತಾರೀಕು 01.06.2023ನೇ ಗುರುವಾರ ಬೆಳಿಗ್ಗೆ ಆರಂಭಗೊಂಡಿತು. ಮೊದಲಿಗೆ ರಾಜ್ಯಮಟ್ಟದಲ್ಲಿ ನಡೆದ ಪ್ರವೇಶೋತ್ಸವದ ವಿಡಿಯೋ ಪ್ರದರ್ಶನ ಜರಗಿತು. ವಿದ್ಯಾರ್ಥಿಗಳ ಹೆತ್ತವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರವೇಶೋತ್ಸವದ ಅಂಗವಾಗಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮೊದಲಿಗೆ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ನಂತರ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅರವಿಂದಾಕ್ಷ ಭಂಡಾರಿ ಅವರು ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮವನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ಅವರು ದೀಪ ಪ್ರಜ್ವಲನ ಮಾಡಿ ಉದ್ಘಾಟಿಸಿದರು ಹಾಗೂ ಭಾಷಣ ಮಾಡಿದರು. ನಂತರ ಮೀಂಜ ವಾರ್ಡ್ ಸದಸ್ಯೆ ಶ್ರೀಮತಿ ರುಕ್ಯ ಸಿದ್ದಿಕ್ ಶಾಲಾ ಪ್ರವೇಶೋತ್ಸವಕ್ಕೆ ಶುಭ ಹಾರೈಸಿದರು.  ಶಾಲಾ ಆಡಳಿತ ಸಲಹೆಗಾರರಾದ ಶ್ರೀ ಶ್ರೀಧರ ರಾವ್ ಆರ್ ಎಂ ಅವರು ಹಲವು ಮಾಹಿತಿಗಳನ್ನು ನೀಡಿ ಶುಭ ಹಾರೈಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಶ್ರೀ ದಾಮೋದರ ಮಾಸ್ಟರ್ ಇವರು ಶುಭ ಹಾರೈಸಿದರು. ಶಾಲಾ ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯಪ್ರಕಾಶ್ ಶುಭಹಾರೈಸಿದರು. ಶಾಲಾ ಪಿಟಿಎ ಉಪಾಧ್ಯಕ್ಷರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ಹಾಗೂ ಎಂಪಿಟಿಎ ಉಪಾಧ್ಯಕ್ಷರಾದ ಶ್ರೀಮತಿ ಸ್ವಪ್ನ ತಮ್ಮ ಉಪಸ್ಥಿತಿಯಲ್ಲಿ ಶುಭ ಹಾರೈಸಿದರು. ನಂತರ ಈ ಸಭೆಯ ಅಧ್ಯಕ್ಷರಾದ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ್ ಈ ಪ್ರವೇಶೋತ್ಸವದ ಪ್ರಯುಕ್ತ ಎಲ್ಲರಿಗೂ ಶುಭ ಹಾರೈಕೆಗಳನ್ನು ನೀಡಿದರು. ಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀ ನಾರಾಯಣ ನಾವುಡ ಇವರು ಗಣ್ಯರಿಗೆ, ವಿದ್ಯಾರ್ಥಿಗಳ ಹೆತ್ತವರಿಗೆ ಧನ್ಯವಾದ ಸಮರ್ಪಿಸಿದರು. ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಪ್ರತಿಭಾ ಪ್ರದರ್ಶನ ಮಾಡಿದರು. ಶಾಲಾ ಅಧ್ಯಾಪಕರಾದ ಶ್ರೀ ಕೃಷ್ಣಶರ್ಮ.ಕೆ ಈ ಕಾರ್ಯಕ್ರಮವನ್ನು ನಿರೂಪಿಸಿದರು.














Comments

Popular posts from this blog

ಶಾಲಾ ಚುನಾವಣೆ 2023-24