*ಶಾಲಾ ಪ್ರವೇಶೋತ್ಸವ ಹಾಗೂ ನೂತನ ಟೈಲ್ಸ್ ಹಾಕಿದ ತರಗತಿ ಕೋಣೆ ಮತ್ತು ಲ್ಯಾಬ್ ಉದ್ಘಾಟನೆ*

 ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮೀಯಪದವು ಇದರ 2025-26 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಹಾಗೂ ನೂತನ ಟೈಲ್ಸ್ ಹಾಕಿದ ತರಗತಿ ಕೋಣೆ ಮತ್ತು ಲ್ಯಾಬ್ ಉದ್ಘಾಟನಾ ಸಮಾರಂಭವು ಬಹಳ ವಿಜೃಂಭಣೆಯಿಂದ ಶಾಲಾ ಸಭಾಂಗಣದಲ್ಲಿ ಜರಗಿತು.ಪೋಲಾರ್ ಬೇರ್ ಐಸ್ ಕ್ರೀಂ ಸಂಸ್ಥೆಯ ಮಾಲಕರೂ ನಮ್ಮ ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳು ಆದ ಶ್ರೀ ಕಿಶೋರ್ ರೈ ಅವರು ಮಾತೃಶ್ರೀ ಯವರ ಸ್ಮರಣಾರ್ಥ ನೀಡಿದ ನೂತನ ಟೈಲ್ಸ್ ಹಾಕಿದ ತರಗತಿ ಕೋಣೆಯ ಹಾಗೂ ಲಾಬ್ ಗಳ ಉದ್ಘಾಟನೆಯನ್ನು ಅವರ ತಂದೆಯವರಾದ ಶ್ರೀ ಬೊಡ್ಡಂಗೋಡಿ ಶ್ರೀ ಸದಾಶಿವ ರೈ ನೆರವೇರಿಸಿದರು. ತದನಂತರ ಶಾಲೆಗೆ ನೂತನವಾಗಿ ಪ್ರವೇಶಾತಿ ಪಡೆದ ಮಕ್ಕಳನ್ನು    ಬಾಡ್ಜ್ ನೀಡಿ ಮೆರವಣಿಗೆಯ ಮೂಲಕ  ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಶಾಲೆಗೆ ಆದರದಿಂದ ಸ್ವಾಗತಿಸಿದರು.ನಂತರ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು. ಮೆರವಣಿಗೆ ನಂತರ ನಡೆದ  ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಶ್ರೀಮತಿ ರುಕಿಯಾ ಸಿದ್ದಿಕ್ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೊಡ್ಡಂಗೋಡಿ ಸದಾಶಿವ ರೈ ಮತ್ತು ಹಾಂಡ್ಸ್ ಓನ್ ಸಿ ಯಸ್ ಆರ್  ಇದರ ಮೇಲಾಧಿಕಾರಿಯಾದ ಶ್ರೀ ಗುರುನಂದನ್ ರವರು ಮಕ್ಕಳಿಗೆ ಹಿತನುಡಿಗಳನ್ನಾಡಿದರು.ಈ ಸಂದರ್ಭದಲ್ಲಿ ಅವರನ್ನು ಶಾಲು ಹೊದೆಸಿ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಟಾಟಾ ಮೋಟಾರ್ಸ್ ಉಪ್ಪಳ ಇವರು ಪ್ರಿ ಪ್ರೈಮರಿ ಮಕ್ಕಳಿಗೆ ನೀಡಿದ ಉಚಿತ ಕಿಟ್ ಗಳನ್ನು ಮಕ್ಕಳಿಗೆ ನೀಡಲಾಯಿತು. ಕನ್ನಡ ಮಾಧ್ಯಮದಲ್ಲಿ ಪ್ರವೇಶಾತಿ ಪಡೆದ ಮಕ್ಕಳಿಗೆ ಅಧ್ಯಾಪಕ ವೃಂದ ನೀಡುವ ಉಚಿತ ಬ್ಯಾಗ್ ವಿತರಣೆ ಈ ಸಂದರ್ಭದಲ್ಲಿ ನಡೆಯಿತು.ಶಾಲಾ ಆಡಳಿತ ಸಲಹೆಗಾರರಾ ಶ್ರೀ ಶ್ರೀಧರ್ ರಾವ್ ಆರ್ ಯಂ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ಸಂದರ್ಭದಲ್ಲಿ 2024-25ನೇ ಸಾಲಿನ ಯಲ್ ಎಸ್ ಎಸ್ ಮತ್ತು ಯು ಎಸ್ ಎಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ‌ ಪಡೆದು ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ಮಕ್ಕಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆಯನ್ನು ಹಾಡಿದ ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ , ಸ್ಟಾಫ್ ಕಾರ್ಯದರ್ಶಿ ಶ್ರೀ ರಾಮಚಂದ್ರ ಕೆ ಯಂ ಧನ್ಯವಾದವಿತ್ತರು.ಎಲ್ ಪಿ. ಯಸ್ ಆರ್ ಜಿ ಸಂಚಾಲಕರಾದ ಶ್ರೀ ಸುನಿಲ್ ಕುಮಾರ್ ಯಂ ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನೃತ್ಯ ಸಿಂಚನ ಮನೋರಂಜನಾ ಕಾರ್ಯಕ್ರಮ ಜರಗಿತು.









































 

Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU