ವಿಶ್ವ ಪರಿಸರ ದಿನ ಆಚರಣೆ

ವಿದ್ಯಾವರ್ಧಕ ಎಯುಪಿ ಶಾಲೆ ಮೀಯಪದವಿನಲ್ಲಿ ವಿಶ್ವ  ಪರಿಸರ ದಿನದ ಕಾರ್ಯಕ್ರಮವು ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಪರಿಸರ ದಿನದ ಮಹತ್ವವನ್ನು ಶಾಲಾ ಅಧ್ಯಾಪಕಿ ರಾಧಾಮಣಿ ಟೀಚರ್ ಇವರು ವಿದ್ಯಾರ್ಥಿಗಳಿಗೆ ತಿಳಿಸಿದರು.ಶಾಲಾ ವಿದ್ಯಾರ್ಥಿಗಳಾದ ಲಿಖಿತ ಟಿ ಹಾಗೂ ಮೊಹಮ್ಮದ್ ಶಿಹಾನ್ ಇವರಿಗೆ ಗಿಡವನ್ನು ನೀಡುವುದರ ಮೂಲಕ ಶಾಲಾ ಮುಖ್ಯ ಶಿಕ್ಷರಾದ ಅರವಿಂದಾಕ್ಷ ಭಂಡಾರಿ ಇವರು ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾವು ರಚಿಸಿದ ವಿಶ್ವ ಪರಿಸರ ದಿನದ ಪೋಸ್ಟರ್ ಗಳನ್ನು ಪ್ರದರ್ಶಿಸಿದರು.ನಂತರ ಪರಿಸರಕ್ಕೆ ಸಂಬಂದಿಸಿದ ಹಾಡನ್ನು ಶಾಲಾ ವಿದ್ಯಾರ್ಥಿಗಳಾದ ಸಾನಿಧ್ಯ ಭಟ್, ಹರಿಸ್ಮಿತಾ ಹಾಗೂ ವೀಕ್ಷಾ ಹಾಡಿದರು.ನಂತರ ಶಾಲಾ ಅಧ್ಯಾಪಕರಾದ ವಿನಯ ಕೃಷ್ಣ ಇವರು ವೈಯಕ್ತಿಕ ನೈರ್ಮಲ್ಯ, ಪರಿಸರ ನೈರ್ಮಲ್ಯ, ಹಸಿರು ಕ್ಯಾಂಪಸ್ ಹಾಗೂ ಶಾಲಾ ಸೌಂದರ್ಯವರ್ಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.ನಂತರ ಶಾಲಾ 7ನೇ ತರಗತಿ ವಿದ್ಯಾರ್ಥಿನಿ ಲಿಖಿತ ತಂದ ಗಿಡವನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು.


 

Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU