Posts

Featured post

ವಿಶ್ವ ಪರಿಸರ ದಿನ ಆಚರಣೆ

Image
ವಿದ್ಯಾವರ್ಧಕ ಎಯುಪಿ ಶಾಲೆ ಮೀಯಪದವಿನಲ್ಲಿ ವಿಶ್ವ  ಪರಿಸರ ದಿನದ ಕಾರ್ಯಕ್ರಮವು ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಪರಿಸರ ದಿನದ ಮಹತ್ವವನ್ನು ಶಾಲಾ ಅಧ್ಯಾಪಕಿ ರಾಧಾಮಣಿ ಟೀಚರ್ ಇವರು ವಿದ್ಯಾರ್ಥಿಗಳಿಗೆ ತಿಳಿಸಿದರು.ಶಾಲಾ ವಿದ್ಯಾರ್ಥಿಗಳಾದ ಲಿಖಿತ ಟಿ ಹಾಗೂ ಮೊಹಮ್ಮದ್ ಶಿಹಾನ್ ಇವರಿಗೆ ಗಿಡವನ್ನು ನೀಡುವುದರ ಮೂಲಕ ಶಾಲಾ ಮುಖ್ಯ ಶಿಕ್ಷರಾದ ಅರವಿಂದಾಕ್ಷ ಭಂಡಾರಿ ಇವರು ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಾವು ರಚಿಸಿದ ವಿಶ್ವ ಪರಿಸರ ದಿನದ ಪೋಸ್ಟರ್ ಗಳನ್ನು ಪ್ರದರ್ಶಿಸಿದರು.ನಂತರ ಪರಿಸರಕ್ಕೆ ಸಂಬಂದಿಸಿದ ಹಾಡನ್ನು ಶಾಲಾ ವಿದ್ಯಾರ್ಥಿಗಳಾದ ಸಾನಿಧ್ಯ ಭಟ್, ಹರಿಸ್ಮಿತಾ ಹಾಗೂ ವೀಕ್ಷಾ ಹಾಡಿದರು.ನಂತರ ಶಾಲಾ ಅಧ್ಯಾಪಕರಾದ ವಿನಯ ಕೃಷ್ಣ ಇವರು ವೈಯಕ್ತಿಕ ನೈರ್ಮಲ್ಯ, ಪರಿಸರ ನೈರ್ಮಲ್ಯ, ಹಸಿರು ಕ್ಯಾಂಪಸ್ ಹಾಗೂ ಶಾಲಾ ಸೌಂದರ್ಯವರ್ಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.ನಂತರ ಶಾಲಾ 7ನೇ ತರಗತಿ ವಿದ್ಯಾರ್ಥಿನಿ ಲಿಖಿತ ತಂದ ಗಿಡವನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು.  

*ಶಾಲಾ ಪ್ರವೇಶೋತ್ಸವ ಹಾಗೂ ನೂತನ ಟೈಲ್ಸ್ ಹಾಕಿದ ತರಗತಿ ಕೋಣೆ ಮತ್ತು ಲ್ಯಾಬ್ ಉದ್ಘಾಟನೆ*

Image
 ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮೀಯಪದವು ಇದರ 2025-26 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಹಾಗೂ ನೂತನ ಟೈಲ್ಸ್ ಹಾಕಿದ ತರಗತಿ ಕೋಣೆ ಮತ್ತು ಲ್ಯಾಬ್ ಉದ್ಘಾಟನಾ ಸಮಾರಂಭವು ಬಹಳ ವಿಜೃಂಭಣೆಯಿಂದ ಶಾಲಾ ಸಭಾಂಗಣದಲ್ಲಿ ಜರಗಿತು.ಪೋಲಾರ್ ಬೇರ್ ಐಸ್ ಕ್ರೀಂ ಸಂಸ್ಥೆಯ ಮಾಲಕರೂ ನಮ್ಮ ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳು ಆದ ಶ್ರೀ ಕಿಶೋರ್ ರೈ ಅವರು ಮಾತೃಶ್ರೀ ಯವರ ಸ್ಮರಣಾರ್ಥ ನೀಡಿದ ನೂತನ ಟೈಲ್ಸ್ ಹಾಕಿದ ತರಗತಿ ಕೋಣೆಯ ಹಾಗೂ ಲಾಬ್ ಗಳ ಉದ್ಘಾಟನೆಯನ್ನು ಅವರ ತಂದೆಯವರಾದ ಶ್ರೀ ಬೊಡ್ಡಂಗೋಡಿ ಶ್ರೀ ಸದಾಶಿವ ರೈ ನೆರವೇರಿಸಿದರು. ತದನಂತರ ಶಾಲೆಗೆ ನೂತನವಾಗಿ ಪ್ರವೇಶಾತಿ ಪಡೆದ ಮಕ್ಕಳನ್ನು    ಬಾಡ್ಜ್ ನೀಡಿ ಮೆರವಣಿಗೆಯ ಮೂಲಕ  ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಶಾಲೆಗೆ ಆದರದಿಂದ ಸ್ವಾಗತಿಸಿದರು.ನಂತರ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು. ಮೆರವಣಿಗೆ ನಂತರ ನಡೆದ  ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಶ್ರೀಮತಿ ರುಕಿಯಾ ಸಿದ್ದಿಕ್ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೊಡ್ಡಂಗೋಡಿ ಸದಾಶಿವ ರೈ ಮತ್ತು ಹಾಂಡ್ಸ್ ಓನ್ ಸಿ ಯಸ್ ಆರ್  ಇದರ ಮೇಲಾಧಿಕಾರಿಯಾದ ಶ್ರೀ ಗುರುನಂದನ್ ರವರು ಮಕ್ಕಳಿಗೆ ಹಿತನುಡಿಗಳನ್ನಾಡಿದರು.ಈ ಸಂದರ್ಭದಲ್ಲಿ ಅವರನ್ನು ಶಾಲು ಹೊದೆಸಿ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಟ...

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU

Image
*ಮನೆಯಿಂದ ಶಾಲೆ ಕಡೆಗೆ...* *ಉಪಜಿಲ್ಲಾ ಪ್ರವೇಶೋತ್ಸವ ಸಂಭ್ರಮದ  ಗಳಿಗೆ* ಮೀಯಪದವು: ಮಂಜೇಶ್ವರ ಉಪಜಿಲ್ಲಾ ಮಟ್ಟದ ಮಕ್ಕಳ ಶಾಲಾ ಪ್ರವೇಶೋತ್ಸವವು ಮೀಯಪದವಿನ  ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಬಹು ವಿಜೃಂಭಣೆಯಿಂದ ಜರಗಿತು.ಮಂಜೇಶ್ವರದ ಮಾನ್ಯ ಶಾಸಕರಾದ ಶ್ರೀ ಎ ಕೆ ಯಂ ಅಶ್ರಫ್ ಅವರು ಪ್ರವೇಶೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಹಿತೈಷಿ ಶ್ರೀ ಮೋಹನ ಶೆಟ್ಟಿ ಮಜ್ಜಾರು ಇವರು ಕೊಡುಗೆಯಾಗಿ ನೀಡಿದ ಬ್ಯಾಗುಗಳನ್ನು ಶಾಸಕರು ಮಕ್ಕಳಿಗೆ ವಿತರಿಸಿದರು. ಮೀಂಜ ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಮಂಜೇಶ್ವರದ ಪ್ರಭಾರ ವಿದ್ಯಾಧಿಕಾರಿಗಳಾದ ಶ್ರೀ ಜಿತೇಂದ್ರ ಅವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.ಮಂಜೇಶ್ವರ ಬ್ಲೋಕ್ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಶಮೀನಾ ಟೀಚರ್,ಮೀಂಜ‌ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ  ಜಯರಾಮ ಬಲ್ಲಂಗುಡೇಲು, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಚೆಯರ್ ಪರ್ಸನ್ ಶ್ರೀಮತಿ ಸರಸ್ವತಿ, ಅಭಿವೃದ್ಧಿ ಸ್ಥಾಯಿ ಸಮಿತಿಯ ಚೆಯರ್ ಪರ್ಸನ್  ಶ್ರೀಮತಿ ರುಕ್ಯಾ ಸಿದ್ದಿಕ್, ಕ್ಷೇಮಾಭಿವೃದ್ಧಿ ಸಮಿತಿಯ ಚೆಯರ್ ಪರ್ಸನ್ ಶ್ರೀ ಬಾಬು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀ ರಾಧಾಕೃಷ್ಣ ಕೆ ವಿ ಮತ್ತು  ಶ್ರೀಮತಿ...