VIDYARANGA

VIDYARANGA CONVENER : HARISH SULAYA

1. ಜಿ.ಎಚ್.ಎಸ್ ಪೈವಳಿಕೆಯಲ್ಲಿ ಜರಗಿದ ವಿದ್ಯಾರಂಗ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಆಧಿಶ್ರೀ ಎಸ್.ಎನ್ ೭ನೇ ತರಗತಿ ಕಥಾ ರಚನೆಯಲ್ಲಿ ಪ್ರಥಮ ಸ್ಥಾನವನ್ನೂ, ಜಾನಪದ ಗೀತೆ ಸ್ಪರ್ಧೆಯಲ್ಲಿ ಚೈತ್ರ ೭ನೇ ತರಗತಿ ಪ್ರಥಮ ಸ್ಥಾನವನ್ನೂ, ಆಸ್ವಾದನ ಟಿಪ್ಪಣಿ ಸ್ಪರ್ಧೆಯಲ್ಲಿ ಸ್ವಾತಿ ೭ನೇ ತರಗತಿ  ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.







1. ತಾರೀಕು 03-10-2015 ರಂದು ನಮ್ಮ ಶಾಲೆಯಲ್ಲಿ ವಿದ್ಯಾರಂಗ ಸಾಹಿತ್ಯ ಕಮ್ಮಟ ಜರಗಿತು. ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಕಮ್ಮಟದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುಧಾಕರ್.ವಿ, ವಿದ್ಯಾರಂಗ ಕನ್ವಿನರ್ ದಾಮೋದರ್ ಮೂಲ್ಯ, ಸ್ಟಾಫ್ ಸೆಕ್ರೆಟರಿ ನಳಿನಿ ಟೀಚರ್, ಯು.ಪಿ ಮತ್ತು ಎಲ್.ಪಿ ವಿಭಾಗದ ಎಸ್.ಆರ್.ಜಿ ಗಳಾದ ನಾರಾಯಣ.ಯು,ಅಶೋಕ್ ಕುಮಾರ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅನುಜ್ಞಾಲಕ್ಷ್ಮಿ ಸ್ವಾಗತಿಸಿ, ಗೀತಾಂಜಲಿ ವಂದಿಸಿ ,ಫಾಥಿಮತ್ ಆಯಿಶ ನಿರೂಪಿಸಿದಳು. ನಂತರ ಮಕ್ಕಳಲ್ಲಿ ಜಾನಪದ ಗೀತೆಗಳು,ಸಾಹಿತಿಗಳ ಫೋಟೋ ಗ್ಯಾಲರಿ,ಕೊಲೇಶ್ ನಿರ್ಮಾಣ, ಕವಿತೆ ರಚನೆ, ನ್ಯೂಸ್ ಪೇಪರ್ ತಯಾರಿ ಮುಂತಾದ ಚಟುವಟಿಕೆಗಳನ್ನು ಮಾಡಿಸಲಾಯಿತು. ಕೊನೆಗೆ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.












2. ನಮ್ಮ ಶಾಲೆಯಲ್ಲಿ ತಾರೀಕು 26-06-2015 ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಇದರ ಅಂಗವಾಗಿ 3 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಕಥಾ ರಚನಾ ಸ್ಪರ್ಧೆ ಜರಗಿತು. ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಶ್ರೀ ದಾಮೋದರ ಮಾಸ್ತರ್ ಸ್ಪರ್ಧೆಯನ್ನು ನೆರವೇರಿಸಿದರು. 


Comments

Popular posts from this blog

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ 2024-25 @ VAUPS MIYAPADAVU