ಶಾಲಾ ಚುನಾವಣೆ 2023-24

 ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕ/ನಾಯಕಿಯ ಆಯ್ಕೆ ಹಾಗೂ ಪಾರ್ಲಿಮೆಂಟ್ ರೂಪಿಕರಣ ಯಂ.ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು.7 ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾದ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ಇವರಿಗೆ ನಾಮ ಪತ್ರ ಸಲ್ಲಿಸಿದರು.ಜುಲೈ 14 ರಂದು ವಿದ್ಯಾರ್ಥಿಗಳು ಮುದ್ರೆ ಒತ್ತಿದ ಕಾಗದವನ್ನು ಮತ ಪೆಟ್ಟಿಗೆಗೆ ಹಾಕುವುದರ ಮೂಲಕ ಮತದಾನ ಗೈದರು. ಒಟ್ಟು 480 ವಿದ್ಯಾರ್ಥಿಗಳು ಮತ ಹಾಕಿದರು.7E ತರಗತಿಯ ಆಯಿಷತ್ ಫಾಯಿಝ ಶಾಲಾ ನಾಯಕಿಯಾಗಿ ಹಾಗೂ 7E ತರಗತಿಯ ಮೊಹಮ್ಮದ್ ಅಯಾದ್ ಉಪನಾಯಕನಾಗಿ ಆಯ್ಕೆಗೊಂಡರು.ಶಾಲಾ ದೈಹಿಕ ಶಿಕ್ಷಕರಾದ ಎಸ್. ಎಸ್.ಪ್ರಸಾದ್ ಹಾಗೂ ಶಾಲಾ ಸಮಾಜ ವಿಜ್ಞಾನ ಕ್ಲಬ್ ನ ಸಂಚಾಲಕ ವಿಘ್ನೇಶ್ ಎಸ್ ಚುನಾವಣೆಯ ನೇತೃತ್ವ ವಹಿಸಿದ್ದರು.










Comments

Popular posts from this blog

ವಿದ್ಯಾವರ್ಧಕ ಶಾಲಾ ಪ್ರವೇಶೋತ್ಸವ 2023-24