PTA PROGRAMS

2017-18  ACADEMIC YEAR

PTA MEETING CONDUCTED ON 20-09-2017
























ರಕ್ಷಕ -ಶಿಕ್ಷಕ ಸಂಘದ ಮಹಾಸಭೆ
ನಮ್ಮ ಶಾಲೆಯಲ್ಲಿ 2017-18 ನೇ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ತಾರೀಕು ೦೧-೦೭-೨೦೧೭ನೇ ಶನಿವಾರ ಶಾಲಾ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು 2016-17ನೇ ವರ್ಷದ ಪಿ.ಟಿ.ಎ ಅಧ್ಯಕ್ಷರಾದ ಥಾಮಸ್ ಡಿ. ಸೋಜಾ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಆರ್.ಎಂ,ಮುಖ್ಯೋಪಾಧ್ಯಾಯರಾದ ಸುಧಾಕರ.ವಿ,ಎಂ.ಪಿ.ಟಿ.ಎ ಅಧ್ಯಕ್ಷೆ ಸ್ವಪ್ನಾ.ಪಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸುಧಾಕರ್.ವಿ ಸ್ವಾಗತಿಸಿ ಹೆತ್ತವರಿಗೆ ಈ ವರ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು  ನೀಡಿದರು.ಇದೇ ಸಂದರ್ಭದಲ್ಲಿ 2016-17 ನೇ ಸಾಲಿನ ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸ್ಕಾಲರ್ ಶಿಪ್ ಗೆ ಅಹ್ರತೆಯನ್ನು ಪಡೆದುಕೊಂಡ ವಿದ್ಯಾರ್ಥಿಗಳಾದ ಲಿಖಿತ ಎಂ.ಎಸ್,ಜಯಪ್ರದಾ ಹಾಗೂ ಸುಷ್ಮಿತಾ ಇವರಿಗೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.ತಡ ನಂತರ ಈ ವರ್ಷದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ತಿಮ್ಮಪ್ಪ ಭಟ್,ಉಪಾಧ್ಯಕ್ಷರಾಗಿ ನಾರಾಯಣ್ ಉಜಿರೆ,ಎಂ.ಪಿ.ಟಿ.ಎ ಅಧ್ಯಕ್ಷೆಯಾಗಿ ಝೀನತ್,ಉಪಾಧ್ಯಕ್ಷೆಯಾಗಿ ಸೌಮ್ಯ ಇವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕ್ರಮವನ್ನುಅಧ್ಯಾಪಕರಾದ ಹರೀಶ್ ಸುಲಾಯ ನಿರೂಪಿಸಿದರು,ಶಾಲಾ ಸ್ಟಾಫ್ ಸೆಕ್ರೆಟರಿ ರಾಮಚಂದ್ರ. ಕೆ.ಎಂ ವಂದಿಸಿದರು.











  
2016-17

ರಕ್ಷಕ -ಶಿಕ್ಷಕ ಸಂಘದ ಮಹಾಸಭೆ
                            ನಮ್ಮ ಶಾಲಾ 2016-17ನೇ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ ಸಂಘದ ಮಹಾಸಭೆ ತಾರೀಕು 25-06-2016 ಶನಿವಾರ ಜರಗಿತು. 2015-16 ನೇ ಸಾಲಿನ ಪಿ.ಟಿ ಎ ಅಧ್ಯಕ್ಷರಾದ ಎಸ್.ಜನಾರ್ಧನ್ ಸಭೆಯ ಅಧ್ಯಕ್ಷರಾಗಿದ್ದರು. ವೇದಿಕೆಯಲ್ಲಿ ಶಾಲಾ ಆಡಳಿತ ಸಲಹೆಗಾರರಾದ ಶ್ರೀ ಶ್ರೀಧರ ರಾವ್,  ಎಂ.ಪಿ.ಟಿ ಎ ಅಧ್ಯಕ್ಷೆ ಶ್ರೀಮತಿ ಲಲಿತಾ ,ಶಾಲಾ ಮುಖ್ಯೋಪಾಧ್ಯಾರಾದ ಶ್ರೀ ಸುಧಾಕರ.ವಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ L.S.S ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿ ಸುಮನಾಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ನಂತರ ರಕ್ಷಕ ಶಿಕ್ಷಕ ಕಮಿಟಿ ರೂಪುಗೊಳಿಸಲಾಯಿತು.  ಈ ವರ್ಷದ ಪಿ.ಟಿ ಎ ಅಧ್ಯಕ್ಷರಾಗಿ ಶ್ರೀ ಥೋಮಸ್ ಡಿಸೋಜಾ  ಹಾಗೂ ಎಂ.ಪಿ.ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ಸ್ವಪ್ನ ಇವರನ್ನು ಆಯ್ಕೆ ಮಾಡಲಾಯಿತು.







2015-16

ಬಾಲ ಸಭೆ ಕಾರ್ಯಕ್ರಮದಲ್ಲಿ ರಕ್ಷಕರು ಹಾಡುವ ಮೂಲಕ ಮಕ್ಕಳನ್ನು ರಂಜಿಸಿದರು. 




ಪುಸ್ತಕ ವಿಳಂಬ ನೀತಿ ವಿರುದ್ಧ ರಕ್ಷಕರ ಪ್ರತಿಭಟನೆ 

 2015-2016 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪಠ್ಯ ಪುಸ್ತಕಗಳು ಶಾಲೆ ಆರಂಭಗೊಂಡು ತಿಂಗಳು ಕಳೆದರೂ ಲಭಿಸದ ಕಾರಣ ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ತಾರೀಕು 06-07-2015 ರಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದವರಿಂದ ಮೀಂಜ ಗ್ರಾಮ ಪಂಚಾಯತ್ ಗೆ ಪ್ರತಿಭಟನೆ ನಡೆಯಿತು.






ರಕ್ಷಕ -ಶಿಕ್ಷಕ ಸಂಘದ ಮಹಾಸಭೆ
                            ನಮ್ಮ ಶಾಲಾ 2015-16ನೇ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ ಸಂಘದ ಮಹಾಸಭೆ ತಾರೀಕು 13-06-2015 ರಂದು ಜರಗಿತು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಂಧಿಕೆಶನ್ ಅವರ ಉಪಸ್ಥಿತಿಯಲ್ಲಿ ಸಭೆ ಪ್ರಾರಂಭಗೊಂಡಿತು. 2014-15 ನೇ ಸಾಲಿನ ಪಿ.ಟಿ ಎ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಶೆಟ್ಟಿ ಸಭೆಯ ಅಧ್ಯಕ್ಷರಾಗಿದ್ದರು. ವೇದಿಕೆಯಲ್ಲಿ ಶಾಲಾ ಆಡಳಿತ ಸಲಹೆಗಾರರಾದ ಶ್ರೀ ಶ್ರೀಧರ್ ರಾವ್,  ಎಂ.ಪಿ.ಟಿ ಎ ಶ್ರೀಮತಿ ಗೀತಾ ಟೀಚರ್,ಶಾಲಾ ಮುಖ್ಯೋಪಾಧ್ಯಾರಾದ ಶ್ರೀ ಜಯರಾಮ್ .ಡಿ ಉಪಸ್ಥಿತರಿದ್ದರು. ನಂತರ ರಕ್ಷಕ ಶಿಕ್ಷಕ ಕಮಿಟಿ ರೂಪುಗೊಳಿಸಲಾಯಿತು .ಈ ವರ್ಷದ ಪಿ.ಟಿ ಎ ಅಧ್ಯಕ್ಷರಾಗಿ ಶ್ರೀ ಜನಾರ್ಧನ ಹಾಗೂ ಎಂ.ಪಿ.ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ಲಲಿತ ಇವರನ್ನು ಆಯ್ಕೆ ಮಾಡಲಾಯಿತು.




2014-15

1.  Class P.T.A conducted on 08-10-2014. Every class teacher gave information about school events and gave children's 1st term exam's progress card to the parents for signature.

2. Class P.T.A conducted on 06-01-2015.Every class teacher gave information about 10-01-2015 camp (ganithotsava,metric melaand vijnana congess), 22-01-2015 sports day and 30-01-2015 school day program...also teachers gave children's midterm exam's progress card to the parents for signature.

Comments

Popular posts from this blog

ವಿದ್ಯಾವರ್ಧಕ ಶಾಲಾ ಪ್ರವೇಶೋತ್ಸವ 2023-24

ಶಾಲಾ ಚುನಾವಣೆ 2023-24